ಬಂಟ್ವಾಳ: ದಿನ ಬಳಕೆ ವಸ್ತುಗಳ ಬೆಲೆ ಏರಿಕೆ-ಮಹಿಳಾ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

News Desk
News Desk

ಬಂಟ್ವಾಳ: ಪಾಣೆಮಂಗಳೂರು ಹಾಗೂ ಬಂಟ್ವಾಳ ಮಹಿಳಾ ಕಾಂಗ್ರೇಸ್ ವತಿಯಿಂದ ದಿನಬಳಕೆ ವಸ್ತುಗಳ ಬೆಲೆ ಏರಿಕೆ ವಿರುದ್ಧ ಹಾಗೂ ಕೇಂದ್ರ ,ರಾಜ್ಯ ಸರಕಾರದ ಜನವಿರೋಧಿ ನೀತಿಯ ವಿರುದ್ಧ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, 2014 ರಿಂದ ಜನವಿರೋಧಿ ಮೂಲಕ ಜನರ ಜೀವನದ ಮೇಲೆ ಆಟ ಆಡುತ್ತಿದೆ. ಆಡಳಿತ ನಡೆಸುವ ಕೇಂದ್ರ ಹಾಗೂ ರಾಜ್ಯದ ಡಬಲ್ ಇಂಜಿನ್ ಸರಕಾರ ಬೆಲೆ ಏರಿಕೆ ಮಾಡಿದೆಯೇ ಹೊರತು ಜನರ ನೋವನ್ನು ಅರಿತಿಲ್ಲ, ಬೆಲೆ ಏರಿಕೆ ಮಾಡಿದ ಸರಕಾರಕ್ಕೆ ತನ್ನ ಧಿಕ್ಕಾರವಿದೆ ಎಂದ ಅವರು,ಬೆಲೆ ಏರಿಕೆಯಿಂದ ನೇರವಾಗಿ ಮಹಿಳೆಯರಿಗೆ ಸಂಕಟ ಆನುಭವಿಸುತ್ತಿದ್ದಾರೆ ಎಂದರು.ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಮತಾ ಗಟ್ಟಿ ಮಾತನಾಡಿ, ಕಾಂಗ್ರೇಸ್ ಪಕ್ಷ ಜನರಿಗೆ ಬದುಕುವುದನ್ನು ಕಲಿಸಿದ್ದು, ಬಿಜೆಪಿ ಜನರ ಬದುಕನ್ನು ಕಸಿದುಕೊಂಡಿದೆ ಎಂದು ಆರೋಪ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷ ಶಾಲೆಟ್ ಪಿಂಟೋ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪಾಣೆಮಂಗಳೂರು ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಯಂತಿ ವಿ‌.ಪೂಜಾರಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಲವಿನಾ ವಿಲ್ಮಾ ಮೋರಾಸ್, ಪ್ರಮುಖರಾದ ಜಾಸ್ಮಿನ್ ಡಿಸೋಜ, ಐಡಾಸುರೇಶ್, ಮಂಜುಳಾ ಕುಶಲ ಪೆರಾಜೆ, ಸಪ್ನಾ ವಿಶ್ವನಾಥ ಪೂಜಾರಿ ಸರಪಾಡಿ, ಧನಲಕ್ಮೀ ಸಿ.ಬಂಗೇರ, ಪ್ಲೋಸಿ ಡಿ.ಸೋಜ,ನಸೀಮಾ, ಅಸ್ಮಾಅಜೀಜ್, ಪುರಸಭಾ ಅಧ್ಯಕ್ಷ ಮಹಮ್ಮದ್ ಶರೀಪ್, ಉಪಾಧ್ಯಕ್ಷೆ ಜೆಸಿಂತಾ, ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಅಬ್ಬಾಸ್ ಆಲಿ, ಲೋಲಾಕ್ಷ ಶೆಟ್ಟಿ, ಶೀಲಾವೇಗಸ್,ಪರಮೇಶ್ವರ ಮೂಲ್ಯ, ಪ್ರೀತಿಡಿನ್ನಾ ಪಿರೇರ, ವಾಸು ಪೂಜಾರಿ, ವೆಂಕಪ್ಪ ಪೂಜಾರಿ, ಪ್ರಶಾಂತ್ ಕುಲಾಲ್ ,ರೋಶನ್ ರೈ, ಸದಾನಂದ ಶೆಟ್ಟಿ, ಗಂಗಾದರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

- Advertisement -
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!