ಗಣೇಶ ಮೂರ್ತಿ ವಿರೂಪಗೊಳಿಸಿದ ಐವರ ಬಂಧನ

ಘಟನೆಯ ಮಾಹಿತಿ ತಿಳಿದ ಮಾಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ಗುಮಾನಿ ಮೇರೆಗೆ ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

News Desk
News Desk

ಮಾಲೂರು, ಸೆ.4: ಗಣೇಶೋತ್ಸವದ ಪ್ರಯುಕ್ತ ಯುವಕ ಮಂಡಳಿ ಮತ್ತು ಸಂಘ ಸಂಸ್ಥೆಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿದ ಆರೋಪದ ಮೇಲೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಮಾಲೂರು ಪೊಲೀಸರು ಸಿಸಿಟಿವಿ ದೃಶ್ಯ ಆಧಾರಿಸಿ ಗುಮಾನಿ ಮೇರೆಗೆ ಮಲ್ಲೇಶ್, ಕಾಂತರಾಜು, ಗಿರೀಶ್, ಪುನೀತ್, ಚಂದು ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಶುಕ್ರವಾರ ತಡರಾತ್ರಿ ನಗರದ ಕುಂಬಾರಪೇಟೆಯಲ್ಲಿ 4, ಬಾಬುರಾವ್ ಬೀದಿಯಲ್ಲಿ 1, ಕುಪ್ಪಶೆಟ್ಟಿ ಬಾವಿ ಬೀದಿ ಬಳಿ 1, ಶ್ರೀಧರ್ಮರಾಯಸ್ವಾಮಿ ದೇವಸ್ಥಾನದ ಬಳಿ 1, ಸಿಪಿ ರಸ್ತೆಯಲ್ಲಿ 1 ಕೆ.ಎಂ.ಅರ್. ಸ್ಟೋರ್ಸ್‌ ಬಳಿ 1 ಸೇರಿ ಒಟ್ಟು 9ಕಡೆ ಗಣೇಶ ಮೂರ್ತಿಗಳನ್ನು ವಿರೂಪಗೊಳಿಸಿರುವುದು ವರದಿಯಾಗಿದೆ. ಇದರ ಜತೆಗೆ ಹಬ್ಬದ ಶುಭಾಶಯಗಳನ್ನು ಕೋರಿ ಹಾಕಲಾಗಿದ್ದ ಫ್ಲೆಕ್ಸ್‌ಗಳು ಮತ್ತು ಅಲ್ಲೇ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನದ ಸೀಟುಗಳನ್ನು ಬ್ಲೇಡ್‌ನಿಂದ ಕೊಯ್ದು ಹಾಕಿರುವುದು ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮಧ್ಯಾಹ್ನ ಆರೋಪಿಗಳನ್ನು ಬಂಧಿಸಿದ ವೇಳೆ ಠಾಣೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಅರೋಪಿಗಳ ಪರ ಮತ್ತು ವಿರುದ್ಧ ಜನರು ಸೇರಿದ್ದರು ಎಂದು ತಿಳಿದು ಬಂದಿದೆ.

- Advertisement -
- Advertisement -
TAGGED:
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!