ಮಂಗಳೂರು: ನಾಳೆ(ಜುಲೈ 28) ದ.ಕ. ಜಿಲ್ಲೆ ಬಂದ್ ಗೆ ಕರೆ ಕೊಟ್ಟಿಲ್ಲ-ಸಂಘಟನೆಗಳಿಂದ ಸ್ಪಷ್ಟನೆ

ಆದರೆ, ಇದು ಸುಳ್ಳು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ಪಷ್ಟಪಡಿಸಿದೆ.

News Desk
News Desk
Google

ಮಂಗಳೂರು, ಜು 27: ಬಿಜೆಪಿ ಹಾಗೂ ಸಂಘಟನೆ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ದ.ಕ. ಜಿಲ್ಲೆಯಲ್ಲಿ ವಿವಿಧ ರೀತಿಯ ಪ್ರಸಂಗಗಳು ನಡೆಯುತ್ತಿದ್ದು ಈ ನಡುವೆ ದ.ಕ. ಜಿಲ್ಲಾ ಬಂದ್ ಕರೆ ನೀಡಲಾಗಿದೆ ಎನ್ನುವ ಸುದ್ದಿಯೊಂದು ಹರಿದಾಡಲಾರಂಭಿಸಿದೆ. ಆದರೆ, ಇದು ಸುಳ್ಳು ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಸ್ಪಷ್ಟಪಡಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಗುರುವಾರದಂದು ದ.ಕ. ಜಿಲ್ಲೆ ಬಂದ್ ಗೆ ವಿಹೆಚ್ ಪಿ ಬಜರಂಗ ದಳ ಕರೆ ನೀಡಿದೆ ಎನ್ನುವ ವಿಚಾರವೊಂದು ಹರಿದಾಡುತ್ತಿದೆ. ಈ ಬಗ್ಗೆ ಸಂಘಟನೆಯ ಪ್ರಮುಖ ನಾಯಕರನ್ನು ಸಂಪರ್ಕಿಸಿದ ದೈಜಿವರ್ಲ್ಡ್ ಸ್ಪಷ್ಟನೆಯನ್ನು ಪಡೆದುಕೊಂಡಿದೆ.

ಜುಲೈ 28ರಂದು ದ.ಕ. ಜಿಲ್ಲೆಯಲ್ಲಿ ಯಾವುದೇ ರೀತಿಯ ಬಂದ್ ಗೆ ಯಾವುದೇ ಹಿಂದೂ ಸಂಘಟನೆಗಳು ಕರೆಕೊಟ್ಟಿಲ್ಲ ಎಂದು ಹಿಹೆಚ್ ಪಿ, ಬಜರಂಗದಳ, ಹಿಂದೂ ಜಾಗರಣ ವೇದಿಕೆ ಸ್ಪಷ್ಟಪಡಿಸಿದೆ.ಬಜರಂಗ ದಳದ ಮುಖಂಡ ಶರಣ್ ಪಂಪ್ ವೆಲ್, ಪುನೀತ್ ಅತ್ತಾವರ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಗಣೇಶ್ ಕೆದಿಲ ಸ್ಪಷ್ಟನೆ ನೀಡಿದ್ದಾರೆ.

- Advertisement -
TAGGED: , ,
VIA: Daijiworld
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!