ಮಂಗಳೂರು: ‘ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ’ ವತಿಯಿಂದ ರಕ್ತದಾನ ಶಿಬಿರ; 96 ಮಂದಿಯಿಂದ ರಕ್ತದಾನ

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನಂದಾವರ ಇದರ ಅಧೀನದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು

News Desk
News Desk

ಬಂಟ್ವಾಳ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಗಣರಾಜ್ಯ ರಕ್ಷಿಸಿ ಎಂಬ ಅಭಿಯಾನದ ಅಂಗವಾಗಿ ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನಂದಾವರ ಇದರ ಅಧೀನದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇವರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು. ಒಟ್ಟು 96ಮಂದಿ ಸ್ವಯಂ ಪ್ರೇರಿತ ರಕ್ತದಾನ ಮಾಡಿ ಜೀವದಾನಿಗಳಾದರು.

ನಂದಾವರ ಘಟಕದ ಅಧ್ಯಕ್ಷರಾದ ಅನ್ಸಾರ್ ರಾಯಲ್ ಕಾರ್ಯಕ್ರಮ ಉದ್ಘಾಟಿಸಿದರು. ಪಾಪ್ಯುಲರ್ ಫ್ರಂಟ್ ಮೆಲ್ಕಾರ್ ಡಿವಿಷನ್ ಅಧ್ಯಕ್ಷರಾದ ಅನ್ವರ್ ಆಲಡ್ಕ ಸ್ವಾಗತಿಸಿದರು. ಪಾಪ್ಯುಲರ್ ಫ್ರಂಟ್ ವಿಟ್ಲ ವಲಯ ಅಧ್ಯಕ್ಷರಾದ ರಹೀಮ್ ಆಲಾಡಿ, SDPI ಸಜೀಪ ಮುನ್ನೂರು ಗ್ರಾಮ ಸಮಿತಿ ಅಧ್ಯಕ್ಷರಾದ ಹಂಝ ನಂದಾವರ, ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪುಷ್ಪಲಾತ, ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆರಾದ ಶ್ರೀಮತಿ ಶಬೀನಾ ಹಮೀದ್ ಹಾಗೂ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನಂದಾವರ ಘಟಕದ ಉಪಾಧ್ಯಕ್ಷರಾದ ಮೊಹಮ್ಮದ್ ತೌಷಿಫ್,  ಜೊತೆ ಕಾರ್ಯದರ್ಶಿಯಾದ ಅಯ್ಯುಬ್ ಕೋಟೆ, ಸದಸ್ಯರಾದ ಅಬೂಬಕ್ಕರ್ ಕೊಟ್ರಸ್, ಸಲೀಮ್ ದಸರಾಗುಡ್ಡೆ, ತೌಷಿಫ್ ದಿಲ್ ಉಪಸ್ಥಿತರಿದ್ದರು,

- Advertisement -
TAGGED:
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!