ಮಂಗಳೂರು: ಷರತ್ತಿಗೊಳಪಡಿಸಿ ಬ್ಯಾನರ್, ಪ್ಲೆಕ್ಸ್ ಗಳಿಗೆ ಅನುಮತಿ ನೀಡಲು ಸೂಚನೆ

ಯುಕ್ತರುಗಳ ಹಂತದಲ್ಲಿ ಅನುಮತಿ ನೀಡುವಂತೆ ಪಾಲಿಕೆಯ ಆಯುಕ್ತರು ಸೂಚಿಸಿದ್ದಾರೆ.

News Desk
News Desk
Representational Image

ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಬ್ಯಾನರ್, ಕಟೌಟ್, ಬಂಟಿಂಗ್ಸ್ ಮತ್ತು ಪ್ಲೆಕ್ಸ್ ಗಳನ್ನು ಅಳವಡಿಸುವ ಬಗ್ಗೆ ಕೆಲವು ಷರತ್ತಿಗೆ ಒಳಪಟ್ಟು ವಲಯ ಆಯುಕ್ತರುಗಳ ಹಂತದಲ್ಲಿ ಅನುಮತಿ ನೀಡುವಂತೆ ಪಾಲಿಕೆಯ ಆಯುಕ್ತರು ಸೂಚಿಸಿದ್ದಾರೆ.
ಷರತ್ತುಗಳಿವು:

  • ಅನುಮತಿ ಪಡೆದ ಜಾಹೀರಾತು ಫಲಕಗಳನ್ನು ಗೊತ್ತುಪಡಿಸಿದ ಸ್ಥಳದಲ್ಲಿ ನಿಗದಿಪಡಿಸಿದ ಅವಧಿಗೆ ಮಾತ್ರ ಅಳವಡಿಸಬೇಕು.
  • ಅನುಮತಿ ಪಡೆದ ಪ್ಲೆಕ್ಸ್ / ಬ್ಯಾನರ್ಗಳಲ್ಲಿ, ಜಾಹೀರಾತು ಫಲಕ ತಯಾರಿಸಿದ ಸಂಸ್ಥೆಯ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯನ್ನು ಸಾರ್ವಜನಿಕರಿಗೆ ಕಾಣುವ ರೀತಿಯಲ್ಲಿ ಕೆಳಭಾಗದಲ್ಲಿ ನಮೂದಿಸಬೇಕು.
  • ಪರಿಸರಕ್ಕೆ ಮಾರಕವಾದ ನಿಷೇಧಿತ ಪ್ಲಾಸ್ಟಿಕ್ ಪ್ಲೆಕ್ಸ್, ಬ್ಯಾನರ್ ಗಳನ್ನು ಅಳವಡಿಸಿದಲ್ಲಿ, ಕೂಡಲೇ ತೆರವುಗೊಳಿಸಿ ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಬೇಕು.
  • ಹೊಸದಾಗಿ ಅನುಮತಿ ನೀಡಲಾಗುವ ಪ್ಲೆಕ್ಸ್, ಬ್ಯಾನರ್ಗಳಿಗೆ ಸಂಬಂಧಿಸಿದಂತೆ ಪ್ಲೆಕ್ಸ್ಗಳಲ್ಲಿ ನಮೂದಿಸಲಾಗುವ ವಿಷಯದ ಬಗ್ಗೆ ಆಯಾಯ ವ್ಯಾಪ್ತಿಯ ಪೊಲೀಸ್ ಇಲಾಖೆಯ ಅನುಮೋದನೆ ಪಡೆದ ವಿಷಯವನ್ನು ನಮೂದಿಸಬೇಕೆಂಬ ಷರತ್ತಿನಡಿ ಅನುಮತಿ ಪತ್ರ ನೀಡಬೇಕು.
  • ಅನಧಿಕೃತ ಬ್ಯಾನರ್, ಕಟೌಟ್, ಬಂಟಿಂಗ್ಸ್, ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ತಮ್ಮ ಅಧೀನ ಅಧಿಕಾರಿ, ಸಿಬ್ಬಂದಿಗಳ ಮೂಲಕ ತೆರವುಗೊಳಿಸುವ ಕಾರ್ಯಾಚರಣೆಯನ್ನು ನಿರಂತರವಾಗಿ ನಡೆಸುವಂತೆ ಹಾಗೂ ಕಾರ್ಯಾಚರಣೆಗೆ ಅಡ್ಡಿ ಪಡಿಸುವವರ ವಿರುದ್ಧ ಸಾರ್ವಜನಿಕ ಆಸ್ತಿ ವಿರೂಪ ನಿಯಮದ ಪ್ರಕಾರ ಮೊಕದ್ದಮೆ ದಾಖಲಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ.

- Advertisement -
TAGGED:
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!