‘ಒಂದು ತಲೆಗೆ ಹತ್ತು ಮುಸ್ಲಿಮರ ತಲೆ’ ಎಂದ ಕಾಳಿಸ್ವಾಮಿ | ಪ್ರಚೋದನಕಾರಿ ಹೇಳಿಕೆಯ ವಿರುದ್ಧ PFI ದೂರು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ PFI ತುಮಕೂರು ಜಿಲ್ಲಾಧ್ಯಕ್ಷ ರಿಹಾನ್ ಖಾನ್, ಕಾಳಿಸ್ವಾಮಿ ಎಂಬಾತ ವಿ.ಎಚ್.ಪಿ, ಬಜರಂಗದಳದೊಂದಿದೆ ಸೇರಿಕೊಂಡು ಶಾಂತಿಯುತವಾಗಿರುವ ತುಮಕೂರಿನಲ್ಲಿ ಹಿಂದೂಗಳನ್ನು ಪ್ರಚೋದಿಸುವ ಹೇಳಿಕೆ ನೀಡುತ್ತಿದ್ದಾನೆ.

News Desk
News Desk

ತುಮಕೂರು: ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕಾಳಿಸ್ವಾಮಿಯ ವಿರುದ್ಧ ಪಾಪ್ಯುಲರ್ ಫ್ರಂಟ್ ತುಮಕೂರು ಜಿಲ್ಲಾ ಸಮಿತಿ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ PFI ತುಮಕೂರು ಜಿಲ್ಲಾಧ್ಯಕ್ಷ ರಿಹಾನ್ ಖಾನ್, ಕಾಳಿಸ್ವಾಮಿ ಎಂಬಾತ ವಿ.ಎಚ್.ಪಿ, ಬಜರಂಗದಳದೊಂದಿದೆ ಸೇರಿಕೊಂಡು ಶಾಂತಿಯುತವಾಗಿರುವ ತುಮಕೂರಿನಲ್ಲಿ ಹಿಂದೂಗಳನ್ನು ಪ್ರಚೋದಿಸುವ ಹೇಳಿಕೆ ನೀಡುತ್ತಿದ್ದಾನೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದೆಂದು ಭರವಸೆ ನೀಡಿದ್ದಾರೆ. ಕಾಳಿಸ್ವಾಮಿಯ ಪ್ರಚೋದನಾಕಾರಿ ಹೇಳಿಕೆಗೆ ತಲೆಗೆಡಿಸದೆ ಶಾಂತಿಯನ್ನು ಕಾಪಾಡುವಂತೆ ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಅವರು ಮನವಿ ಮಾಡಿದ್ದಾರೆ

ಒಂದು ತಲೆಗೆ ಹತ್ತು ಮುಸ್ಲಿಮರ ತಲೆ ತೆಗೆಯಬೇಕೆಂದು ಕಾಳಿಸ್ವಾಮಿ ಮತ್ತೆ ತನ್ನ ನಾಲಗೆಯನ್ನು ಹರಿಯ ಬಿಟ್ಟಿದ್ದ. ಇದರ ವಿರುದ್ಧ PFI ತುಮಕೂರು ಜಿಲ್ಲಾ ಸಮಿತಿ ಪೊಲೀಸರಿಗೆ ಲಿಖಿತ ದೂರು ದಾಖಲಿಸಿದೆ.

- Advertisement -
TAGGED: ,
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!