ಕೋಟ: ಬೆಂಕಿ ಹಚ್ಚಿಕೊಂಡು ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ

ಮೃತ ವಿದ್ಯಾರ್ಥಿನಿಯನ್ನು ಕೋಟ ಪಡುಕರೆ ಫ್ರೌಢಶಾಲೆಯ 10ತರಗತಿಯ ವಿದ್ಯಾರ್ಥಿ ಅನನ್ಯ (15) ಎಂದು ಗುರುತಿಸಲಾಗಿದೆ.

News Desk
News Desk

ಕೋಟ, ಆ 01: ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಎಸ್ಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೋಟ ಕೊರವಡಿಯಲ್ಲಿ ಆ 1ರ ಸೋಮವಾರ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕೋಟ ಪಡುಕರೆ ಫ್ರೌಢಶಾಲೆಯ 10ತರಗತಿಯ ವಿದ್ಯಾರ್ಥಿ ಅನನ್ಯ (15) ಎಂದು ಗುರುತಿಸಲಾಗಿದೆ.ವಿದ್ಯಾರ್ಥಿನಿ ಖಿನ್ನತೆಗೊಳಗಾಗಿದ್ದು ಶಾಲೆಗೆ ಹೊರಡುವ ಸಂದರ್ಭದಲ್ಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಒಂದು ದಿಕ್ಕಿನ ಕೋಣೆಗೆ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ.

ಈ ವೇಳೆ ಪಕ್ಕದ ಮನೆಯವರು ಬೆಂಕಿಯನ್ನು ನೋಡಿ ಓಡೋಡಿ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆ ಕೊಂಡೊಯ್ದಿದ್ದರೂ ಪ್ರಯೋಜನವಾಗದೆ ಅಸುನೀಗಿದ್ದಾಳೆ.ಬಾಲಕಿ ಮನೆಯಲ್ಲಿ ಅಜ್ಜಿ ಮತ್ತು ಆಕೆಯ ಚಿಕ್ಕಮ್ಮನ ಜೊತೆ ವಾಸ್ತವ್ಯವಾಗಿದ್ದು ಆಕೆಯ ತಂದೆ – ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕುಂದಾಪುರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
TAGGED: ,
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!