ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ- ಅವಶೇಷಗಳ ಅಡಿ ಸಿಲುಕಿಕೊಂಡ ನಾಲ್ವರ ಸಾವು

ಸೋಮವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆವರೆಗೂ ಮುಂದುವರಿದ ಪರಿಣಾಮ ಭಟ್ಕಳ ಪಟ್ಟಣ ಸಂಪೂರ್ಣವಾಗಿ ಮುಳುಗಡೆಯಾಗಿದೆ. 

News Desk
News Desk

ಟ್ಕಳ: ಭಟ್ಕಳದಲ್ಲಿ ಏಕಾಏಕಿ ಆರ್ಭಟಿಸಿದ ಮಳೆಯಿಂದಾಗಿ ದೊಡ್ಡ ಅನಾಹುತ ಸೃಷ್ಟಿಯಾಗಿದೆ. ಭಾರಿ ಮಳೆಗೆ ಭಟ್ಕಳದ ಕೆಲ ಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿದ್ದು, ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮಳೆಯಾಗಿದ್ದು 530 ಸೆ.ಮಿ ಮಳೆಯಾಗಿದೆ. 

ಸೋಮವಾರ ಸಂಜೆಯಿಂದ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗೆವರೆಗೂ ಮುಂದುವರಿದ ಪರಿಣಾಮ ಭಟ್ಕಳ ಪಟ್ಟಣ ಸಂಪೂರ್ಣವಾಗಿ ಮುಳುಗಡೆಯಾಗಿದೆ. 
ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು ಇನ್ನು ಹಲವು ಪ್ರದೇಶಗಳಿಗೆ ನೀರು ನುಗ್ಗಿದೆ. 

ನಿನ್ನೆ ಸಂಜೆ ಶುರುವಾದ ಮಳೆ ಮದ್ಯ ರಾತ್ರಿಯಾದಂತೆ ಮನೆಗಳಿಗೆ ನೀರು ನುಗ್ಗಿ ಬಹುತೇಕ ಮಳೆ ಮುಳುಗಡೆಯಾಗಳು ಆರಂಭಿಸಿದೆ. ಹಲವು ಮನೆಗಳಲ್ಲಿದ್ದ ವೃದ್ಧಾರನ್ನು ಊರಿನ ಮುಖಂಡರು ಹಾಗೂ ಯುವಕರು ತಮ್ಮ ಸಂಬಂಧಿಕರ ಮನೆಗೆ ಸ್ಥಳಾಂತರ ಮಾಡಿದ್ದಾರೆ.

ಮಣ್ಕುಳಿ, ಚೌಥನಿ, ಮುಂಡಳ್ಳಿ, ಮುಟ್ಟಳ್ಳಿ, ಮೂಢ ಭಟ್ಕಳ ಬೈಪಾಸ ಸೇರಿದಂತೆ ಅನೇಕ ಗ್ರಾಮಗಳು ಮುಳುಗಡೆಯಾಗಿದೆ. ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕ ಅನೇಕ ಕಡೆಗಳಲ್ಲಿ ಮನೆಯಲ್ಲಿ ಸುಲಿಕಿಕೊಂಡಿರುವವರನ್ನು ರಕ್ಷಣೆ ಮಾಡುತ್ತಿದ್ದಾರೆ.  ಮಣ್ಕುಳಿಯಿಂದ ಮೂಢ ಭಟ್ಕಳ ಬೈಪಾಸನ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನದಿಯ ರೀತಿ ಹರಿದು ಹೋಗುತ್ತಿರುವ ಹಿನ್ನೆಲೆ ರಸ್ತೆ ಸಂಪರ್ಕ ಕೆಲ ಕಾಲ ಕಡಿತಗೊಂಡಿತ್ತು. 

- Advertisement -

ಭಾರಿ ಮಳೆಯಿಂದ ಭಟ್ಕಳದ ಅನೇಕ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡ ಹಿನ್ನೆಲೆ. ಎಸ್.ಡಿ.ಆರ್.ಎಫ್ ತಂಡ ಆಗಮಿಸಿ ಕೆಲವರನ್ನು ರಕ್ಷಣೆ ಮಾಡಿದ್ದಾರೆ. ರಕ್ಷಣೆ ಮಾಡಿದವರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ತಾಲೂಕಿನ ಪುರವರ್ಗ, ಮುಂಡಳ್ಳಿ, ಕುಕ್ಕನಿರ್,  ಕಾಯ್ಕಿಣಿ, ಹಾಗೂ ಹಲವು ಭಾಗಗಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. 

ಇತಿಹಾಸದಲ್ಲೇ ಮೊದಲ ಬಾರಿಗೆ ಭಟ್ಕಳದಲ್ಲಿ ಈ ರೀತಿ ಮಳೆಯಾಗಿದ್ದು ತಾಲೂಕಿನ ಜನತೆ ಒಂದು ರಾತ್ರಿ ಬೆಳಗಾಗುವ ತನಕ ಬೆಚ್ಚಿ ಬಿದ್ದಿದ್ದಾರೆ. ಈ ಬಾರಿಯ ಮಳೆಗೆ ಬಾರಿ ಪ್ರಮಾಣದ ಹಾನಿಯಾಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲ ನೀರು ಪಾಲಾಗಿದೆ. 

ಇನ್ನು ಭಟ್ಕಳ ಪಟ್ಟಣ ಸಂಪೂರ್ಣ ಮುಳುಗಡೆಯಾಗಿ ರಸ್ತೆಗಳಲ್ಲಿ ನೀರು ನದಿಯಂತೆ ಹರಿದು ಹೋಗುತ್ತಿದೆ. ಎದೆಮಟ್ಟದ ನೀರು ತುಂಬಿಕೊಂಡಿದ್ದು ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳು ಜಲಾವೃತಗೊಂಡಿವೆ.‌ ಇನ್ನು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಜಲಾವೃತಗೊಂಡ ಕಾರಣ ವಾಹನ ಸಂಚಾರ ಅಸಾಧ್ಯವಾಗಿರುವ ಕಾರಣ ಭಟ್ಕಳ ಕಡೆ ಪ್ರಯಾಣ ಬೆಳೆಸದಂತೆ ಜಿಲ್ಲಾಧಿಕಾರಿ ಮುಲ್ಲೇ ಮುಹಿಲನ್ ಸೂಚಿಸಿದ್ದಾರೆ. 

ಜಿಲ್ಲೆಯಲ್ಲೇ ಭಟ್ಕಳ ತಾಲೂಕಿನಲ್ಲಿ ಈ ರೀತಿ ಮಳೆಯಾಗಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದು ಜಿಲ್ಲಾಧಿಕಾರಿ ಮುಲ್ಲೇ ಮುಹಿಲನ್ ಭಟ್ಕಳಕ್ಕೆ ಭೇಟಿ ನೀಡಿ ಪ್ರವಾಹ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಬಾರಿ ಮಳೆಗೆ ಅಕ್ಷರಶಃ ಭಟ್ಕಳ ಜನತೆ ನಲುಗಿದ್ದು ಪ್ರವಾಹ ಪೀಡಿತ ಪ್ರದೇಶಕ್ಕೆ ಶಾಸಕ ಸುನೀಲ ನಾಯ್ಕ ಹಾಗೂ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಣೆ ಮಾಡುವಲ್ಲಿ ಕುದ್ದು ಮುಂದಾಗಿದ್ದು ತಾಲೂಕಿನ ಜನೆತೆಯ ಬೆನ್ನಿಗೆ ನಿಂತಿದ್ದರು. 

ಇನ್ನು ಮುಟ್ಟಳ್ಳಿಯಲ್ಲಿ ಮಂಗಳವಾರ ಬೆಳಿಗ್ಗೆ
ಮನೆಯೊಂದರ ಮೇಲೆ ಗುಡ್ಡ ಕುಸಿದಿದ್ದು, ಮನೆ ಸಂಪೂರ್ಣ ಕುಸಿದು ಅವಶೇಷಗಳಡಿ ನಾಲ್ವರು ಸಿಲುಕಿಕೊಂಡಿದ್ದರು.

ಮನೆಯಲ್ಲಿದ್ದ ಲಕ್ಷ್ಮಿನಾರಾಯಣ ನಾಯ್ಕ (48), ಅವರ ಪುತ್ರಿ ಲಕ್ಷ್ಮಿ ನಾಯ್ಕ (33), ಪುತ್ರ ಅನಂತ ನಾರಾಯಣ ನಾಯ್ಕ (32) ಹಾಗೂ ಸಂಬಂಧಿ ಪ್ರವೀಣ ಬಾಲಕೃಷ್ಣ ನಾಯ್ಕ (20) ಮಣ್ಣಿನಲ್ಲಿ ಸಿಲುಕಿಕೊಂಡಿದ್ದವರ ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

ಗುಡ್ಡದ ಮೇಲಿನಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಮನೆ ಸಂಪೂರ್ಣ ನಾಶವಾಗಿದ್ದು, ಸ್ಥಳಕ್ಕೆ ತೆರಳಿದ ಸ್ಥಳೀಯರು, ಹಾಗೂ ಮುಟ್ಟಳ್ಳಿ ಭಾಗದ ಜನರು ಕಾರ್ಯಾಚರಣೆ ನಡೆಸಿದ್ದರು. ನಂತರ ಸ್ಥಳಕ್ಕೆ ಬಂದ ಎಸ್.ಡಿ.ಆರ್.ಎಫ್. ತಂಡ ಸತತ ನಾಲ್ಕು ತಾಸುಗಳ‌ ಕಾರ್ಯಾಚರಣೆಯ ಬಳಿಕ ನಾಲ್ವರ ಮ್ರತ ದೇಹ ಹೊರತೆಗೆಯಲಾಯಿತು.

ಅವಶೇಷಗಳ ಅಡಿ ನಾಲ್ವರು ಸಿಲುಕಿಕೊಂಡಿದ್ದು ಎರಡು ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಯುತ್ತಿತ್ತು.  ಸ್ಥಳದಲ್ಲಿ ಸಾವಿರಾರು ಜನರು, ಅಧಿಕಾರಿಗಳು ಸೇರಿದ್ದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್., ತಹಸೀಲ್ದಾರ ಡಾ. ಸುಮಂತ ರಕ್ಷಣಾ ಕಾರ್ಯವನ್ನು ವೀಕ್ಷಿಸಿದರು.


ಒಟ್ಟಾರೆ ಸತತ 12 ತಾಸಿಗು ಅಧಿಕ ಕಾಲ‌ ಸುರಿದ‌ ಮಳೆಯು ಭಟ್ಕಳ ತಾಲೂಕನ್ನು ಮುಳುಗಡೆಗೊಳಿಸುವುದರ ಜೊತೆಗೆ ನಾಲ್ವರನ್ನು ಬಲಿ‌ತೆಗೆದುಕೊಂಡಿತು

- Advertisement -
TAGGED: ,
Share this Article
1 Comment

Leave a Reply

Your email address will not be published. Required fields are marked *

error: Alert: Copyrighted Content!!