ಗಂಗೊಳ್ಳಿ : ಸಾವರ್ಕರ್ ನಾಮಫಲಕ ಅನಾವರಣ

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ರಸ್ತೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಮಾರ್ಗ ದೊಡ್ಡಹಿತ್ಲು ಎಂಬ ಶಾಶ್ವತ ನಾಮ‌ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

News Desk
News Desk

ಗಂಗೊಳ್ಳಿ : (ಸೆಪ್ಟೆಂಬರ್ 3)ಸಾವರ್ಕರ್ ಕ್ರಾಂತಿ ಮತ್ತು ತ್ಯಾಗದ ಸಂಕೇತ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ಹೋರಾಟಗಾರ. ಅವರ ಹೆಸರನ್ನು ಶಾಶ್ವತವಾಗಿ ನೆನಪಿಕೊಳ್ಳುವ ಉದ್ದೇಶದಿಂದ ಗಂಗೊಳ್ಳಿ ದೊಡ್ಡಹಿತ್ಲು ರಸ್ತೆಗೆ ಸಾವರ್ಕರ್ ಹೆಸರನ್ನು ಇಟ್ಟಿರುವುದು ಶ್ಲಾಘನೀಯ ಎಂದು ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಮಿತಿ ಸದಸ್ಯ ವಾಸುದೇವ ದೇವಾಡಿಗ ಹೇಳಿದರು.

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ದೊಡ್ಡಹಿತ್ಲು ರಸ್ತೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಮಾರ್ಗ ದೊಡ್ಡಹಿತ್ಲು ಎಂಬ ಶಾಶ್ವತ ನಾಮ‌ಫಲಕವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಸುಜಾತಾ ಪ್ರಕಾಶ್ ಶೇರುಗಾರ್ ದೀಪ ಪ್ರಜ್ವಲಿಸಿದರು. ಮೀನುಗಾರ ಮುಖಂಡ ರಾಮಪ್ಪ ಖಾರ್ವಿ, ಹಿಂದು ಜಾಗರಣ ವೇದಿಕೆ ಮುಖಂಡ ನವೀನ್ ದೊಡ್ಡಹಿತ್ಲು, ರವಿ ಬೇಲಿಕೇರಿ, ಯೋಗೀಶ ಖಾರ್ವಿ, ವೆಂಕಟೇಶ ಖಾರ್ವಿ ದೊಡ್ಡಹಿತ್ಲು, ಅನಿಲ್ ಸಾಲಿಯಾನ್, ಕಾರ್ತಿಕ್, ದಿಲೀಪ್, ರವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿ ಬಂದರು ಹಿಂದು ಜಾಗರಣ ವೇದಿಕೆ ವೀರ ಸಾವರ್ಕರ್ ಘಟಕದ ವತಿಯಿಂದ ಸಾವರ್ಕರ್ ಕುರಿತಾದ ಕಿರು ಪುಸ್ತಕ ವಿಸ್ತರಿಸಲಾಯಿತು.

- Advertisement -
- Advertisement -
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!