ರೌಡಿಶೀಟರ್ ಪಿಟ್ಟಿ ನಾಗೇಶ್ ಹತ್ಯಾ ಆರೋಪಿಗಳ ಖುಲಾಸೆ

ಸಾಕ್ಷಿ ಅಧಾರಗಳ ಕೊರತೆಯಿಂದ ಆರೋಪಿಗಳ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣದಲ್ಲಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದೆ

News Desk
News Desk

ಉಡುಪಿ ಸೆ.6: ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ರೌಡಿಶೀಟರ್ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಸಂತೆಕಟ್ಟೆಯ ಪ್ರಗತಿನಗರ ಮೂಡುತೋನ್ಸೆಯ ನೇಜಾರ್ ರೈಸ್ ಮಿಲ್ ಹಿಂಭಾಗದ ಸಲಾಮಿ ಕುಟೀರದ ಐವನ್ ರಿಚರ್ಡ್ (41) ಅಲಿಯಾಸ್ ಮುನ್ನಾ, ಅಲೆವೂರು ಗ್ರಾಮದ ಗುರುಪ್ರಸಾದ್ ಶೆಟ್ಟಿ (34), ಕೊರಂಗ್ರಪಾಡಿಯ ಹನುಮಾನ್ ಗ್ಯಾರೇಜ್ ಬಳಿಯ ಸಂತೋಷ ಪೂಜಾರಿ (40), ವಿಶ್ವನಾಥ ಶೆಟ್ಟಿ (40), ಬಡಗುಬೆಟ್ಟು ಕುಕ್ಕಿಕಟ್ಟೆಯ ಕಲ್ಯಾಣನಗರದ ಜಾಕೀರ್ ಹುಸೇನ್ (33) ಪ್ರಕರಣದಲ್ಲಿ ಖುಲಾಸೆಗೊಂಡಿರುವ ಆರೋಪಿಗಳು.

2014 ಸೆಪ್ಟೆಂಬರ್ ನಲ್ಲಿ ಉದ್ಯಾವರದ ಹಲೀಮಾ ಸಬ್ಜು ಹಾಲ್ ಬಳಿ ಪಿಟ್ಟಿ ನಾಗೇಶನನ್ನು 5 ಜನ ಅಡ್ಡಗಟ್ಟಿ ಕೊಲೆಗೈದಿದ್ದರು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದರು.

ಪ್ರಕರಣದ ವಿಚಾರಣೆ ವೇಳೆ ಆರೋಪಿಗಳ ಪರ ಹಿರಿಯ ನ್ಯಾಯವಾದಿ ಶಾಂತರಾಮ್ ಶೆಟ್ಟಿ ವಾದಿಸಿದ್ದರು.

- Advertisement -

ಪ್ರಕರಣಕ್ಕೆ ಸಂಬಂಧಿಸಿ ಪೂರಕ ಸಾಕ್ಷಿ ಅಧಾರಗಳ ಕೊರತೆಯಿಂದ ಆರೋಪಿಗಳ ಆರೋಪ ಸಾಬೀತಾಗದ ಹಿನ್ನಲೆಯಲ್ಲಿ ನ್ಯಾಯಾಲಯ ಪ್ರಕರಣದಲ್ಲಿದ್ದ ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ತಿಳಿದು ಬಂದಿದೆ.

- Advertisement -
TAGGED:
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!