ಉಡುಪಿ: ‘ಜಿಲ್ಲಾಧಿಕಾರಿಗಳೊಂದಿಗೆ ಒಂದು ದಿನ’ ಕಾರ್ಯಕ್ರಮ

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ 15,000 ರೂ ಬಹುಮಾನ ಗೆದ್ದಿರುವುದಲ್ಲದೇ ಜಿಲ್ಲಾಧಿಕಾರಿಯವರೊಂದಿಗೆ ಸಭೆಗಳಿಗೆ ಭಾಗವಹಿಸಿ ಅವಕಾಶ ಪಡೆದಿದ್ದಾರೆ.

News Desk
News Desk

ಉಡುಪಿ (ಆ.20): ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ದಿ ಇಲಾಖೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಕುರಿತ ವಿಷಯದ ಬಗ್ಗೆ ಏಪರ್ಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಕೋಟದ ವಿವೇಕಾನಂದ ಪದವಿ ಪೂರ್ವ ಕಾಲೇಜಿ(Vivekananda Collage)ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಆ ಬಾಲಕಿಯನ್ನು ಜಿಲ್ಲಾಧಿಕಾರಿಯವರು ಶುಕ್ರವಾರ ಜಿಲ್ಲಾಧಿಕಾರಿ ಕಾರ್ಯವನ್ನು ತೋರಿಸಲು ತಮ್ಮೊಂದಿಗೆ ದಿನಪೂರ್ತಿ ಕರೆದೊಯ್ದಿದ್ದಾರೆ. 

ಬ್ರಹ್ಮಾವರ ತಾಲೂಕಿನ ಹೇರೂರಿನ ರಮೇಶ್ ಪೂಜಾರಿ ಮತ್ತು ಶ್ಯಾಮಲಾಇಬ್ಬರು ಅವಳಿ ಮಕ್ಕಳಲ್ಲಿ ದೀಕ್ಷಿತಾ ಈ ಸಾಧನೆ ಮಾಡಿದ್ದಾರೆ. ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ 15,000 ರೂ ಬಹುಮಾನ ಗೆದ್ದಿರುವುದಲ್ಲದೇ ಜಿಲ್ಲಾಧಿಕಾರಿಯವರೊಂದಿಗೆ ಸಭೆಗಳಿಗೆ ಭಾಗವಹಿಸಿ ಅವಕಾಶ ಪಡೆದಿದ್ದಾರೆ.

ಮನೆಗೆ ಕಾರು ಕಳುಹಿಸಿದ್ದ ಜಿಲ್ಲಾಧಿಕಾರಿ: ಉಡುಪಿ(Udupi)ಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಬ್ರಹ್ಮಾವರ ತಾಲೂಕಿನ ಹೇರೂರು ಬಳಿಯ ದೀಕ್ಷಿತಾ ಅವರ ಮನೆಗೆ ಜಿಲ್ಲಾಧಿಕಾರಿಯವರು ತಮ್ಮ ಕಾರನ್ನು ಕಳುಹಿಸಿ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದಿದ್ದಾರೆ. ಸಂಜೆ ವಾಪಾಸು ಕಾರಿನಲ್ಲಿ ಕಳುಹಿಸಿದ್ದಾರೆ.

ದಿನವಿಡೀ ಸಭೆಗಳಿಗೆ ಭಾಗಿ: ಶುಕ್ರವಾರ ಬೆಳಿಗ್ಗೆ ತಾಲೂಕು ಕಚೇರಿಯಲ್ಲಿದ್ದ ಸಭೆ, ಕೃಷ್ಣಮಠದ ಕಾರ್ಯಕ್ರಮ, ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಭೆಗಳಲ್ಲಿ ವೇದಿಕೆಯಲ್ಲಿ ತಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಜಿಲ್ಲಾಧಿಕಾರಿಯ ಕಾರ್ಯಗಳ ಬಗ್ಗೆ ಬಾಲಕಿಗೆ ತಿಳಿಸಿದ್ದಾರೆ.

- Advertisement -

ಸದಾ ಹಸನ್ಮುಖಿಯಾಗಿರುವ ಜಿಲ್ಲಾಧಿಕಾರಿಯವರ ಜೊತೆ ದಿನಪೂರ್ತಿ ಸಂಚರಿಸಿ ಸಭೆಗಳಲ್ಲಿ ಭಾಗವಹಿಸಿದ್ದು ಸಂತಸ ನೀಡಿದೆ. ಜಿಲ್ಲಾಧಿಕಾರಿ ಅಂದ್ರೆಯಾವುದೇ ಚಿಂತೆ ಇಲ್ಲದೇ ಇರಬಹುದು ಎಂಬ ನನ್ನ ಊಹೆ ಸುಳ್ಳಾಗಿದೆ. ಇಂದು ಅನೇಕ ಹೊಸ ವಿಷಯಗಳನ್ನು ಕಲಿಯಲು ನನಗೆ ಅವಕಾಶ ದೊರೆಯಿತು. ಮುಂದೆ ನಾನು ಯು.ಪಿ.ಎಸ್.ಸಿ ಪರೀಕ್ಷೆ ಬರೆದು ಐ.ಎ.ಎಸ್ ಮಾಡಬೇಕೆಂಬ ಆಸೆ ಇದೆ ಎಂದು ದೀಕ್ಷಿತಾ ಹೇಳಿದ್ದಾರೆ.

ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನಡೆಸಿದ ಜಿಲ್ಲಾ ಮಟ್ಟದ ಪ್ರಭಂದ ಸ್ಪರ್ಧೆಯಲ್ಲಿ ದೀಕ್ಷಿತಾ ಪ್ರಥಮ ಸ್ಥಾನಿಯಾಗಿದ್ದಾರೆ. ಸರಕಾರದ ವಿವಿಧ ಇಲಾಖೆಗಳ ಬಗ್ಗೆ ಜನರಿಗೆ ತಿಳಿಸಲು ವಿದ್ಯಾರ್ಥಿನಿಯನ್ನು ನನ್ನ ಜೊತೆ ಒಂದು ದಿನ ಎಲ್ಲಾ ಸಭೆಗಳಿಗೆ ಕರೆದುಕೊಂಡು ಹೋಗಿದ್ದೇನೆ. ಇಂದು ಅವರು ಒಟ್ಟಾರೆ ಸಭೆಗಳು ಹೇಗಿರುತ್ತದೆ ಎಂಬುದನ್ನು ಗಮನಿಸಿದ್ದಾರೆ. ವಿದ್ಯಾರ್ಥಿ‌ಜೀವನದಲ್ಲಿ ಇದೊಂದು ಪ್ರೇರಣಾದಾಯಕ ಅವಕಾಶ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಹೇಳಿದ್ದಾರೆ.

- Advertisement -
TAGGED:
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!