ಕಾಪು: ಫ್ಲ್ಯಾಟ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿ ಪೊಲೀಸ್ ಬಲೆಗೆ

ಮಂಗಳೂರು ಬಜಪೆ ಮೂಲದ ಪ್ರಸ್ತುತ ಮೂಳೂರು ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್‌ನಲ್ಲಿ ವಾಸವಿರುವ ವಾಜೀದ್ (25) ಮತ್ತು ಉಡುಪಿ ಕಡಿಯಾಳಿಯ ಬಾಡಿಗೆ ಮನೆಯ ವಾಸಿ ಶಹನಾಜ್ (32) ಬಂಧಿತ ಆರೋಪಿಗಳು.

News Desk
News Desk

ಕಾಪು: ಫ್ಲ್ಯಾಟ್‌ನಿಂದ ಚಿನ್ನಾಭರಣ ಸಹಿತ ನಗ-ನಗದು ಕಳವುಗೈಯ್ಯುತ್ತಿದ್ದ ಯುವತಿ ಮತ್ತು ಯುವಕನೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನ ಕಾಪುವಿನಲ್ಲಿ ನಡೆದಿದೆ.

ಮಂಗಳೂರು ಬಜಪೆ ಮೂಲದ ಪ್ರಸ್ತುತ ಮೂಳೂರು ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್‌ನಲ್ಲಿ ವಾಸವಿರುವ ವಾಜೀದ್ (25) ಮತ್ತು ಉಡುಪಿ ಕಡಿಯಾಳಿಯ ಬಾಡಿಗೆ ಮನೆಯ ವಾಸಿ ಶಹನಾಜ್ (32) ಬಂಧಿತ ಆರೋಪಿಗಳು.

ಮೂಳೂರಿನ ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್‌ನಲ್ಲಿ ವಾಸವಿದ್ದ ಸರ್ಫ್‌ರಾಜ್‌ ಅವರು ಮನೆಯಲ್ಲಿ ಇಲ್ಲದಿದ್ದಾಗ ಅವರ ಮನೆಯ ಕಪಾಟಿನ ಡ್ರಾಯರ್‌ನಲ್ಲಿಟ್ಟಿದ್ದ 1.98 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಾಣೆಯಾಗಿರುವ ವಿಚಾರ ಮುನ್ನೆಲೆಗೆ ಬಂದಿದ್ದ ಕಾರಣ ಅವರು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ಸಾಕ್ಷಿ ಆಧಾರದಲ್ಲಿ ದಾಖಲೆಗಳನ್ನು ಪರಿಶೀಲಿಸಿ ಸಂಶಯದ ಮೇರೆಗೆ ವಾಜೀದ್‌ನ್ನು ವಶಕ್ಕೆ ಪಡೆದಿದ್ದರು. ಆಗ ಆತ ಕಳ್ಳತನ ಮಾಡಿರುವುದನ್ನು ಬಾಯ್ಬಿಟ್ಟಿದ್ದ. ಈ ಕೃತ್ಯದಲ್ಲಿ ತನ್ನ ಸ್ನೇಹಿತೆ ಶಹನಾಜ್ ಕೂಡಾ ಕೈ ಜೋಡಿಸಿರುವುದಾಗಿ ತಿಳಿಸಿದ್ದ.

- Advertisement -

ಎಸ್‌ಪಿ ಹಾಕೆ ಅಕ್ಷಯ್ ಮಚೀಂದ್ರಾ , ಹೆಚ್ಚುವರಿ ಎಸ್‌ಪಿ ಎಸ್‌.ಟಿ ಸಿದ್ಧಲಿಂಗಯ್ಯ ಅವರ ನಿರ್ದೇಶನದಂತೆ ಕಾರ್ಕಳ ಡಿವೈಎಸ್‌ಪಿ ವಿಜಯಪ್ರಸಾದ್ ಅವರ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿ ಆತನಿಂದ 3.38 ಲಕ್ಷ ರೂ ಸೊತ್ತು ವಶಕ್ಕೆ ಪಡೆದಿದ್ದಾರೆ.

ಈತನ ವಿರುದ್ಧ ವಾಹನ ಕಳವು, ದನ ಕಳವು, ಚಿನ್ನಾಭರಣ ಕಳವು ಸೇರಿದಂತೆ 10ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
TAGGED: ,
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!