ನರ್ಸ್‌ ವೇಷದಲ್ಲಿ ಬಂದು ಮಗು ಕದ್ದ ಪ್ರಕರಣ ಬೇಧಿಸಿದ ಹಾಸನ ಪೊಲೀಸರು ; ಮಗು ಕಳ್ಳತನದ ಹಿಂದಿನ ಕಾರಣ ರೋಚಕ.

ಅರಕಲಗೂಡು ಮಗು ಕಳವು ಪ್ರಕರಣ - ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು- ಮಗಳ ವೈವಾಹಿಕ ಜೀವನ ಸುಂದರಗೊಳಿಸಲು ಮಗು ಕದ್ದ ತಂದೆ-ತಾಯಿ

News Desk
News Desk

ಹಾಸನ : ಜಿಲ್ಲೆ ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ  ನರ್ಸ್ ವೇಷದಲ್ಲಿ ಬಂದು ಮಗು ಕಳವು ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮಾರ್ಚ್ 14 ರಂದು ಆಗ ತಾನೆ ಜನಿಸಿದ್ದ ಮಗು ಕಳ್ಳತನವಾಗಿತ್ತು. ಅಸ್ಸಾಂ ಮೂಲದ ಕೂಲಿ ಕಾರ್ಮಿಕ ದಂಪತಿಯ ಗಂಡು ಮಗುವನ್ನ ಹುಟ್ಟಿದ ದಿನದ ರಾತ್ರಿಯೇ ಕಳ್ಳತನ ಮಾಡಲಾಗಿತ್ತು. ಅಸ್ಸಾಂ ಮೂಲದ ಸೂರಜ್ ಅಲಿ ಮತ್ತು ಯಾಸ್ಮಿನ್ ದಂಪತಿ ಮಗುವನ್ನ ನರ್ಸ್ ಸೋಗಿನಲ್ಲಿ ಬಂದ ಐವರ ತಂಡ, ಮಗು ಕಳ್ಳತನ ಮಾಡುವುದರಲ್ಲಿ ಯಶಸ್ವಿಯಾಗಿದ್ದರು.

ಸುಳಿವು ನೀಡಿದ ಸಿಸಿಟಿವಿ.

ಮಗು ಕಳ್ಳತನಕ್ಕೆ ಯತ್ನಿಸಿದ ಸಂಪೂರ್ಣ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಗುವಿನ ತಂದೆಯನ್ನು ಔಷಧಿ ತರೊದಕ್ಕೆ ಕಳಿಸಿ, ಮಗುವಿಗೆ ಡ್ರಾಪ್ಸ್ ಹಾಕಿಸೋ ನೆಪದಲ್ಲಿ ಮಗು ಎಸ್ಕೇಪ್ ಮಾಡಿದ್ರು.‌ ಇದೀಗ ಅರಕಲಗೂಡು ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಶೈಲಜಾ, ಯಶ್ವಂತ್, ಅರ್ಪಿತಾ, ಸುಮಾ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಮಗು ರಕ್ಷಿಸಿ ಹೆತ್ತಮ್ಮನ ಮಡಿಲು ಸೇರಿಸಿದ್ದಾರೆ. ಮಗು ಮರಳಿ ತಾಯಿ ಮಡಿಲಿಗೆ ಸಿಕ್ಕಿದ್ದಕ್ಕೆ ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

ಮಗು ಕದ್ದ ಕಾರಣದ ಹಿಂದೆ ಇದೆ ಮನಕರಗುವ ಸ್ಟೋರಿ

ಅರಕಲಗೂಡು ತಾಲೂಕಿನ ಕಣಿಯಾರು ಗ್ರಾಮದ ಸುಶ್ಮಿತಾ ಎಂಬಾಕೆಯನ್ನು ಮೈಸೂರಿನ ಯುವಕನೊಬ್ಬನಿಗೆ ಕೊಟ್ಟ ವಿವಾಹ ಮಾಡಲಾಗಿತ್ತು. ಆದರೆ ಮದುವೆ ಆಗಿ ಐದು ವರ್ಷ ಕಳೆದರೂ ಸುಶ್ಮಿತಾಳಿಗೆ ಮಕ್ಕಳು ಆಗಿರಲಿಲ್ಲ, ಇದೇ ವಿಚಾರಕ್ಕೆ ಸುಶ್ಮಿತಾ ಗಂಡನಿಗೆ ಮತ್ತೊಂದು ಮದುವೆ ಮಾಡಲು ಗಂಡನ ಮನೆಯವರು ತಯಾರು ಮಾಡಿದ್ರಂತೆ. ಇದ್ರಿಂದ ಆತಂಕಗೊಂಡು ತಮ್ಮ ಮನೆ ಮಗಳ ಬಾಳು ಹಾಳಾಗುತ್ತೆ ಅಂತಾ ಸುಶ್ಮಿತ ತಾಯಿ ಶೈಲಜಾ, ಹಾಗೂ ಮಗ ಯಶ್ವಂತ್, ಇನ್ನೋರ್ವ ಪುತ್ರಿ ಸುಮ, ಸುಮಳ ಸ್ನೇಹಿತೆ ಅರ್ಪಿತಾ ಮಗುವೊಂದನ್ನ ಕದ್ದು ತಮ್ಮ ಮಗಳ ಮಡಿಲಿಗೆ ಸೇರಿಸೋ ಪ್ಲಾನ್ ಮಾಡಿದ್ದರು.

ಆಗ ಇವ್ರ ಕಣ್ಣಿಗೆ ಬೀಳೋದೆ ಈ ಅಸ್ಸಾಂ ದಂಪತಿ ಮಗು, ಅಸ್ಸಾಂ ಮೂಲದ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದ ಕಾರಣ ಈ ಮಗುವನ್ನ ನಾವು ಕದ್ದರೆ ನಮ್ಮ ಅಕ್ಕನ ಬಾಳು ಸರಿಯಾಗಲಿದೆ ಎಂಬ ಕಾರಣಕ್ಕೆ ಸುಶ್ಮಿತಾ ಮನೆಯವರು ಈ ಕೃತ್ಯ ಎಸಗುತ್ತಾರೆ. ಮೊಬೈಲ್ ಲೊಕೇಶನ್ ಹಾಗೂ ಸಿಸಿ ಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

- Advertisement -
- Advertisement -
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!