IND vs WI Live Score 2nd ODI: ಟಾಸ್‌ ಗೆದ್ದ ವಿಂಡೀಸ್‌ ಬ್ಯಾಟಿಂಗ್‌ ಆಯ್ಕೆ!

ಮೊದಲ ಪಂದ್ಯದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಸುಧಾರಿತ ಪ್ರದರ್ಶನದೊಂದಿಗೆ ವೆಸ್ಟ್‌ ಇಂಡೀಸ್‌ ಎದುರು ಮೇಲುಗೈ ಸಾಧಿಸುವತ್ತ ಎದುರು ನೋಡುತ್ತಿದೆ.

News Desk
News Desk
ಹೈಲೈಟ್ಸ್
  • ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ.
  • ಸರಣಿ ಗೆದ್ದು ಇತಿಹಾಸ ಬರೆಯುವ ಲೆಕ್ಕಾಚಾರದಲ್ಲಿರುವ ಶಿಖರ್‌ ಧವನ್‌ ಸಾರಥ್ಯದ ಭಾರತ ತಂಡ.
  • ವಿಂಡೀಸ್‌ ವಿರುದ್ಧ ಸತತ 12ನೇ ಒಡಿಐ ಸರಣಿ ಗೆಲ್ಲುಲು ರಣ ತಂತ್ರ ರೂಪಿಸಿರುವ ಟೀಮ್ ಇಂಡಿಯಾ.

ಪೋರ್ಟ್‌ ಆಫ್‌ ಸ್ಪೇನ್‌ (ಟ್ರಿನಿಡಾಡ್‌): ಸರಣಿ ಗೆಲ್ಲುವ ಲೆಕ್ಕಾಚಾರ ಹೊಂದಿರುವ ಟೀಮ್ ಇಂಡಿಯಾ, ಮೊದಲ ಪಂದ್ಯದಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸಿ ಸುಧಾರಿತ ಪ್ರದರ್ಶನದೊಂದಿಗೆ ವೆಸ್ಟ್‌ ಇಂಡೀಸ್‌ ಎದುರು ಮೇಲುಗೈ ಸಾಧಿಸುವತ್ತ ಎದುರು ನೋಡುತ್ತಿದೆ.

ವಿಂಡೀಸ್‌ ವಿರುದ್ಧದ 2ನೇ ಪಂದ್ಯದಲ್ಲಿ ಶಿಖರ್‌ ಧವನ್‌ ಸಾರಥ್ಯದ ಭಾರತ ತಂಡಕ್ಕೆ ಜಯ ಲಭ್ಯವಾದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಭಾರತ ತಂಡ ಒಂದು ತಂಡದ ಎದುರು ಸತತ 12 ಒಡಿಐ ಸರಣಿ ಗೆದ್ದ ಇತಿಹಾಸ ಬರೆಯಲಿದೆ.

ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಭಾರತ ತಂಡ 308 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತ್ತು. ಆದರೆ, ಬೌಲಿಂಗ್‌ನಲ್ಲಿ ಕೊಟ್ಟ 22 ಹೆಚ್ಚುವರಿ ರನ್‌, ಮತ್ತು ರಣತಂತ್ರದಲ್ಲಿನ ವೈಫಲ್ಯ ಪರಿಣಾಮ ಸೋಲಿನ ದವಡೆಗೆ ಸಿಲುಕಿತ್ತು. ಆದರೆ, ಕೊನೆಯ ಓವರ್‌ನಲ್ಲಿ ಒತ್ತಡ ನಿಭಾಯಿಸುವ ಮೂಲಕ 3 ರನ್‌ಗಳ ಅಂತರದಲ್ಲಿ ಜಯ ಕಸಿದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಎರಡನೇ ಪಂದ್ಯದಲ್ಲಿ ಈ ತಪ್ಪುಗಳು ನಡೆಯದಂತೆ ಎಚ್ಚರ ವಹಿಸುವ ಕಡೆಗೆ ಟೀಮ್ ಇಂಡಿಯಾ ಗಮನ ನೀಡಿದೆ.

ಅವೇಶ್‌ ಖಾನ್‌ ಪದಾರ್ಪಣೆ
ಭಾರತ ತಂಡ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಒಂದು ಬದಲಾವಣೆ ತಂದುಕೊಂಡಿದೆ. ವೇಗದ ಬೌಲರ್‌ ಪ್ರಸಿಧ್‌ ಕೃಷ್ಣ ಹೊರಗುಳಿದಿದ್ದು, ಅವರ ಜಾಗದಲ್ಲಿ ಮತ್ತೊಬ್ಬ ಯುವ ವೇಗಿ ಅವೇಶ್‌ ಖಾನ್‌ ಆಡುವ ಹನ್ನೊಂದರ ಬಳಗ ಸೇರಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ವಿಂಡೀಸ್‌ ಕೂಡ ಒಮದು ಬದಲಾವಣೆ ತಂದು ದುದಕೇಶ್ ಮೋತಿ ಅವರನ್ನು ಕೈಬಿಟ್ಟು ಹೇಡೆನ್‌ ವಾಲ್ಷ್‌ ಅವರನ್ನು ಕಣಕ್ಕಿಳಿಸಿದೆ.

- Advertisement -

IND vs WI 2ನೇ ಒಡಿಐ ಪಂದ್ಯದ ಸ್ಕೋರ್‌ ಕಾರ್ಡ್‌

ಪ್ಲೇಯಿಂಗ್‌ ಇಲೆವೆನ್‌ ವಿವರ
ವೆಸ್ಟ್‌ ಇಂಡೀಸ್‌ XI: ಶೇಯ್‌ ಹೋಪ್‌ (ವಿಕೆಟ್‌ಕೀಪರ್‌), ಬ್ರಾಂಡನ್‌ ಕಿಂಗ್‌, ಶಮ್ರಾ ಬ್ರೂಕ್ಸ್‌, ಕೈಲ್‌ ಮೇಯರ್ಸ್‌, ನಿಕೋಲಸ್‌ ಪೂರನ್‌ (ನಾಯಕ), ರೋವ್ಮನ್‌ ಪೊವೆಲ್‌, ರೊಮಾರಿಯೊ ಶೆಫರ್ಡ್‌, ಅಕೆಲ್‌ ಹೊಸೇನ್‌, ಹೇಡೆನ್‌ ವಾಲ್ಷ್‌, ಅಲ್ಝಾರಿ ಜೋಸೆಫ್‌, ಜೇಡೆನ್‌ ಸೀಲ್ಸ್.

ಟೀಮ್ ಇಂಡಿಯಾ XI: ಶಿಖರ್‌ ಧವನ್‌ (ನಾಯಕ), ಶುಭಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌ ಯಾದವ್‌, ಸಂಜು ಸ್ಯಾಮ್ಸನ್‌ (ವಿಕೆಟ್‌ಕೀಪರ್‌), ದೀಪಕ್‌ ಹೂಡ, ಅಕ್ಷರ್‌ ಪಟೇಲ್‌, ಶಾರ್ದುಲ್‌ ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಯುಜ್ವೇಂದ್ರ ಚಹಲ್‌, ಅವೇಶ್ ಖಾನ್‌.

ಇತ್ತಂಡಗಳ ವಿವರ
ವೆಸ್ಟ್‌ ಇಂಡೀಸ್‌:
 ಶೇಯ್ ಹೋಪ್ (ವಿಕೆಟ್‌ಕೀಪರ್‌), ನಿಕೋಲಸ್ ಪೂರನ್ (ನಾಯಕ), ಬ್ರಾಂಡನ್ ಕಿಂಗ್, ಶಮ್ರಾ ಬ್ರೂಕ್ಸ್, ಕೈಲ್ ಮೇಯರ್ಸ್, ರೋವ್ಮನ್ ಪೊವೆಲ್, ಅಕೆಲ್ ಹೊಸೇನ್, ರೊಮಾರಿಯೊ ಶೆಫರ್ಡ್, ಅಳ್ಝಾರಿ ಜೋಸೆಫ್, ಗುದಕೇಶ್ ಮೋತಿ, ಜೇಡನ್ ಸೀಲ್ಸ್, ಕೀಮೋ ಪಾಲ್, ಕೀಸಿ ಕಾರ್ಟಿ.

ಭಾರತ: ಶಿಖರ್ ಧವನ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್‌), ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ಅಕ್ಷರ್ ಪಟೇಲ್, ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಲ್, ಪ್ರಸಿಧ್ ಕೃಷ್ಣ, ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಅವೇಶ್ ಖಾನ್, ಅರ್ಷದೀಪ್‌ ಸಿಂಗ್.

- Advertisement -
Share this Article
Leave a comment

Leave a Reply

Your email address will not be published. Required fields are marked *

error: Alert: Copyrighted Content!!